<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೯.:ಅರ್ಥಸಹಿತ.'''
ಮಂಕುತಿಮ್ಮನ ಕಗ್ಗ; :ಅರ್ಥಸಹಿತ
ಪದ್ಯ – ೨೭೧
ವ್ಯರ್ಥವೀ ಜೀವನದ ಬಡಿದಾಟವೆನ್ನದಿರು
ಅರ್ಥವಹುದು ನಿನಗೆ ಪೂರ್ಣದರ್ಶನದಿಂ
ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ
ಪೂರ್ತಿಯಿದನರಿಯೆ ಸೊಗ – ಮಂಕುತಿಮ್ಮ
 ವ್ಯರ್ಥವೀ = ವ್ಯರ್ಥವು+ ಈ//ಪೂರ್ತಿಯಿದನರಿಯೆ = ಪೂರ್ತಿ+ಇದನು+ಅರಿಯೆ .
 ಈ ಜೀವನದ ಹೋರಾಟವನ್ನು ವ್ಯರ್ಥ ಎನ್ನದಿರು. ಈ ಸೃಷ್ಟಿಯ ಸಂಪೂರ್ಣ ದರ್ಶನವಾದಾಗ ನಿನಗೆ ಈ ಜಗತ್ತಿನ ಸಾರ್ಥಕತೆ ಅರ್ಥವಾಗುತ್ತದೆ. ಜೀವ ಮತ್ತು ಜಡ ರೂಪದಲ್ಲಿ ಆ ಪರಮಾತ್ಮನ ಲೀಲಾ ನರ್ತನ ನಡೆಯುತ್ತಿದೆ. ಇದರ ಸಂಪೂರ್ಣ ರೂಪ ನೋಡಿದರೆ ಸೊಗಸು ಎಂದು ಜಗತ್ಸೃಷ್ಟಿಯ ವಿಶೇಷವನ್ನು ಅರುಹಿದ್ದಾರೆ. 
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.
♠೫೫೫೫೫೫೫೫೫೫೫೫೫೫೫೫೫೫♠
-೦♦♦♣♣♣♣♣♣♣♣♣♣♣♣♦♦೦-

ನೋಡಿ
<ಮಂಕುತಿಮ್ಮನ ಕಗ್ಗ-ಕಂತು ೯. ಅರ್ಥ ಸಹಿತ
ಮಂಕುತಿಮ್ಮನ ಕಗ್ಗ-ಕಂತು ೧೧.> ಅರ್ಥ ಸಹಿತ
ನೋಡಿ

ಉಲ್ಲೇಖ
 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ